ಪಾಠಶಾಲಾ ಬಗ್ಗೆ

ಬ್ಯಾಡಗಿಯ ಶ್ರೀ ಗುರು ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯು ( ಸಿಂದಗಿ ಮಠ) ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ಧಾರ್ಮಿಕ ಕೇಂದ್ರವಾಗಿದೆ. ಒಣ ಮೆಣಸಿನಕಾಯಿಗೆ ಬ್ಯಾಡಗಿ ಪಟ್ಟಣ ವಿಶ್ವ ವಿಖ್ಯಾತ ಮನ್ನಣೆ ಪಡೆದಿದೆ.   ಹಾನಗಲ್ಲ ಕುಮಾರ ಶ್ರೀಗಳ ಕರಸಂಜಾತರಾಗಿ ಬೆಳೆದ ಬಿಜಾಪುರ ಜಿಲ್ಲೆಯ ಸಿಂದಗಿ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು ತಮ್ಮ ಗುರುಗಳ ಹೆಸರಿನಲ್ಲಿ  ಇಸ್ವಿ ಸನ್ 1968 ರಲ್ಲಿ ಬ್ಯಾಡಗಿಯಲ್ಲಿ  ಸಂಸ್ಥಾಪಿಸಿದರು‌.  ಹಾವೇರಿ, ಗದಗ ಇನ್ನಿತರ ನಗರಗಳಲ್ಲಿ ಪಾಠಶಾಲೆ ಆರಂಭಿಸಿದ ಶ್ರೀಗಳು ಸಮಾಜ ಸೇವೆಗಾಗಿ ತಮ್ಮ  ಬದುಕನ್ನೆ ಸಮಾಜಕ್ಕೆ ಅರ್ಪಿಸಿದರು. ಶ್ರೀಗಳ ಲಿಂಗೈಕ್ಯದ ಬಳಿಕವೂ ಎದೆಗುಂದದ ಶಿಷ್ಯವರ್ಗ & ಭಕ್ತವೃಂದ ತಮ್ಮ ಪರಿಶ್ರಮ ಧಾರೆ ಎರೆದು ಇಂದಿಗೂ ಪಾಠಶಾಲೆಗಳನ್ನು ಜೀವಂತವಾಗಿಟ್ಟಿದ್ದಾರೆ.ಪಾಠಶಾಲೆವು ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ತನ್ನನ್ನು ಅರ್ಪಿಸಿಕೊಂಡಿದೆ.
6 ಮತ್ತು 7 ನೇ ತರಗತಿಯಿಂದ ಮಕ್ಕಳಿಗೆ ಪಾಠಶಾಲೆಯಲ್ಲಿ ಪ್ರವೇಶವಿದೆ. ಪದವಿ ಹಂತದವರೆಗೂ ಶೈಕ್ಷಣಿಕ ಸೌಲಭ್ಯ ನೀಡುತ್ತದೆ. 1968ರಲ್ಲಿ ಕೇವಲ 5 ಮಕ್ಕಳಿಂದ ಪ್ರಾರಂಭವಾದ ಧಾರ್ಮಿಕ ಶಾಲೆಯಲ್ಲಿ ಪ್ರಸ್ತುತ 110 ವಟುಗಳಿದ್ದಾರೆ.

Play Video

ಸಂಸ್ಥಾಪಕರ ಪರಿಚಯ

ಪ್ರಾತಃಸ್ಮರಣೀಯರಾದ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ಈ ಶತಮಾನದ ಅಗ್ರಮಾನ್ಯ ಸಮಾಜ ಸುಧಾರಕರು. ಸಮಾಜದ ಜಾಗೃತಿಗಾಗಿ ಅವರು ತೆರೆದ ಬಾಗಿಲುಗಳು ಅಪೂರ್ವವಾದವು ಅಖಿಲ ಭಾರತ ವೀರಶೈವ ಮಹಾಸಭೆ, ಶಿವಯೋಗ ಮಂದಿರ ಸ್ಥಾಪನೆ, ಪಂಚಾಕ್ಷರಿ ಗವಾಯಿಗಳು ನಿರ್ಮಾಣ ಅವರ ಸಾಧನೆಯ ಮೈಲುಗಲ್ಲುಗಳು ಅವರ ಸೇವೆಯಲ್ಲಿ ತಮ್ಮ ಬಾಳಿನ ಧನ್ಯತೆಯನ್ನು ಕಂಡುಕೊಂಡ ಅವರ ಹೆಸರು ತಮ್ಮ ಉಸಿರೆನ್ನುವಷ್ಟು ತಾದಾತ್ಯದಿಂದ ನಡೆದುಕೊಂಡವರು ಸಿಂದಗಿ ಪಟ್ಟಾಧ್ಯಕ್ಷರು.

ಬಿಜಾಪುರ ಜಿಲ್ಲೆಯ ಸಿಂದಗಿ ಹಿರಿಯಮಠದ ಅಧಿಕಾರಿಗಳು, ಶ್ರೀ ಮ. ಫ. ಚ. ಶಾಂತವೀರ ಪಟ್ಟಾಧ್ಯಕ್ಷರು ಧಾರವಾಡ ಜಿಲ್ಲೆಯ ಉತ್ತರ ಭಾಗದ ಹಾವೇರಿ, ಹಾನಗಲ್ಲ ತಾಲೂಕ ಹಾಗೂ ಮಲೆನಾಡಿನ ಕೆಲವು ಹಳ್ಳಿಗಳಲ್ಲಿ “ಸಿಂದಗಿ ಪಟ್ಟಾಧ್ಯಕ್ಷರು” ಎಂದು ಖ್ಯಾತರು. ಕಡುಬಡತನ ಕುಟುಂಬ ಒಂದರಲ್ಲಿ ಹುಟ್ಟಿ, ಸಾಮಾನ್ಯರಂತೆ ಬೆಳೆದು ತಮ್ಮ ತ್ಯಾಗ ಸೇವೆ ಪರಿಶ್ರಮ ಗಳಿಂದ ಅಸಾಧಾರಣವಾಗಿ ಬೆಳಗಿಸಿದ, ಪಟ್ಟಾಧ್ಯಕ್ಷರ ಜೀವನವೇ ಒಂದು ಪವಾಡ. ಅವರದು ಸೀದಾ ವ್ಯಕ್ತಿತ್ವ ಆಯಸ್ಕಾಂತದಂತೆ ಅವರ ಅಂತಃಕರುಣೆ, ಆದ್ರತೆಗೆ ಎಂಥವರೂ ಆಕರ್ಷಿತರಾಗುತ್ತಿದ್ದರು ,ಅವರು ತಮ್ಮಜೀವನಾವಧಿಯಲ್ಲಿ ವೀರಶೈವರ ಧಾರ್ಮಿಕ ರಂಗದ ಕೊರತೆಗಳನ್ನು ಕಂಡು ಹಿಡಿದು ಜನರ ಆಚಾರ ವಿಚಾರಗಳ ಸುಧಾರಣೆಗಾಗಿ ಧಾರ್ಮಿಕ ಪಾಠ ಶಾಲೆಗಳನ್ನು ಸ್ಥಾಪಿಸಿ ತನ್ಮೂಲಕ ಹಳ್ಳಿ ಪಟ್ಟಣಗಳಿಗೆ ಆಚಾರ ಸಂಪನ್ನ ಸುಶೀಲ ವಿಧ್ಯಾರ್ಥಿ ಸಾಧಕ , ಶಾಸ್ತ್ರಿ ,ಪಟ್ಟಾಧಿಕಾರಿ , ವಿರಕ್ತ ಮೂರ್ತಿಗಳು ಸಿದ್ಧಗೊಳಿಸಿ ಮಾನಸಿಕ ಸ್ವಾರ್ಥ, ಸಂರಕ್ಷಣೆಗೆ ಬಹಳಷ್ಟು ಪ್ರಯತ್ನಿಸಿದರು, ಅವತ ವ್ಯಕ್ತಿಗತ ನಡುವಳಿಕೆಯಂತೂ ಅಪ್ಯಾಯಮಾನ .ಎಂಥಯ ದುಃಖ ಆರ್ತರೋಗಿ ಅವರ ಹತ್ತಿರ ಹೋದರೂ ಆತನ ತೊಂದರೆ ಪರಿಹರಿಸಿ ಸಂತೃಪ್ತಿಗೊಳಿಸುವ ಕಕ್ಕುಲಾತಿಯ ಜಾಣ್ಮೆ ಅವರಲ್ಲಿತ್ತು. ಅವರದು ಬಿಡುವಿಲ್ಲದ ದುಡಿಮೆ ,ಸವುಡಿಲ್ಲದ ಸಾಧನೆ , ಅವರಿಗೆ ಯೋಗ ಶಾಸ್ತ್ರ ಹಾಗೂ ಆಯುರ್ವೇದದಲ್ಲಿ ಅಪಾರ ಅನುಭವ, ಮನಃಶಾಸ್ತ್ರ, ಲೌಕಿಕ ಜ್ಞಾನದಲ್ಲಿ ಅವರನ್ನು ಸರಿಗಟ್ಟುವ ಸ್ವಾಮಿಗಳು ಅಪರೂಪ . ಅವರು ಗುರು ವಿರಕ್ತ ಪಕ್ಷ ಪಂಗಡಗಳಲ್ಲಿ ಎಂದೂ ತೊಡಗಲಿಲ್ಲ ಕೀರ್ತಿ ವಾರ್ತೆಗಳಿಗಾಗಿ ಹಾತೊರೆಯಲಿಲ್ಲ ಸನ್ಮಾನ ಸಂಭಾವನೆಗಳಿಗಾಗಿ ಹಂಬಲಿಸಲಿಲ್ಲ, ಸದ್ದು ಗದ್ದಲವಿಲ್ಲದೆ ಸದಾ ಕಾರ್ಯತತ್ಪರರಾಗುವುದು ಅವರಿಗೆ ಬಹಳ ಪ್ರೀತಿಯ ಕಾರ್ಯವಾಗಿತ್ತು. ಮಾತು ಬೆಳ್ಳಿ ಮೌನ ಬಂಗಾರವೆಂಬುದು ಅವರಿಗೆ ಅಕ್ಷರ ಸಹ ಅನ್ವಯಿಸಿತ್ತು.

ಪೂಜ್ಯ ಪಟ್ಟಾಧ್ಯಕ್ಷರು ಪರಹಿತ ಮಾಡುವುದರಲ್ಲಿಯೇ ವಿಶ್ರಾಂತಿಯನ್ನು ಕಂಡರಲ್ಲದೇ ವಿಶ್ರಾಂತಿಯಲ್ಲಿ ಅವರು ಎಂದೂ ವಿಶ್ರಾಂತಿಯನ್ನು ಕಾಣದೆ, ಪಟ್ಟಾಧ್ಯಕ್ಷರು ಆಕಸ್ಮಿಕ ಅನಿರೀಕ್ಷಿತ ರೀತಿಯಲ್ಲಿ ಈ ಲೋಕದಿಂದ ದಿನಾಂಕ ೧೬-೦೨-೧೯೮೦ ಈ ಮಹಾಶಿವರಾತ್ರಿಯ ಪರ್ವಕಾಲದಲ್ಲಿ ಚಿರನಿದ್ರೆಯಲ್ಲಿ ಮಲಗಿದರು, ಅತ್ತ ಅಮವಾಸ್ಯೆಯಾದುದರಿಂದ ಇರುಳು ಸೂರ್ಯಗ್ರಹಣವಿದ್ದುದರಿಂದ ಹಗಲು ಬ್ರಹ್ಮಾಂಡದ ತುಂಬೆಲ್ಲ ಕತ್ತಲು ಕವಿದಂತೆ ಇತ್ತು. ಅಮಾವಾಸ್ಯೆಯ ಸೂರ್ಯಗ್ರಹಣ ವಿಲ್ಲದಿದ್ದರು ಗುರು ದಿವಾಕರನು ಕಣ್ಮರೆಯಾದುದರಿಂದ ಪಿಂಡಾಂಡ ಗಳು ಭಕ್ಕರ ತುಂಬೆಲ್ಲ ಶೋಕಾಂಧಕಾರ ಕವಿಯಿತು ಸಾವಿರಾರು ಸೂರ್ಯರು ಉದಯಿಸಿದರು ಹರಿಯದ ಅಜ್ಞಾನದ ಕತ್ತಲೆಯನ್ನು ಓರ್ವ ಸದ್ಗು ರು ಭಾಸ್ಕರನು ಕಳೆಯುವನೆಂದ ಮೇಲೆ ಗುರುದಿವಾಕರನು ಭಾನುವಿಗಿಂತ ಮೇಲಲ್ಲವೇ ಸಮಾಜದ ತುಂಬೆಲ್ಲ ಶೋಕಾಂಧಕಾರ ಮುತ್ತಿತ್ತು ಅವರ ಶಿಷ್ಯ ಸಮೂಹವು ಕಂಬನಿಯ ಕೊಡೆ ಹರಿಸಿತು.

ಹಾವೇರಿಯಲ್ಲಿ ಜರುಗಿದ ಅವರ ಅಂತ್ಯ ಯಾತ್ರೆ ನಾಡಿನ ಮೂಲೆಗಳಿಂದ ಅಸಂಖ್ಯಾತ ಭಕ್ತರು ಅನೇಕ ಮಠಾಧೀಶ್ವರರೂ ಪುಷ್ಪಾಂಜಲಿ , ಭಾಷ್ಪಾಂಜಲಿ , ಶ್ರದ್ಧಾಂಜಲಿ ಸಮರ್ಪಿಸಿದರು. ಶಿವಾಚಾರ್ಯರ ಮೃಣ್ಮಯ ದೇಹ ಕಣ್ಮರೆಯಾದರು ಅವರ ಚಿನ್ಮಯ ದೇಹದ ಜ್ಯೋತಿ ಶಿಷ್ಯ ಕೋಟಿಯ ಹೃದ್ಗುಹೆಯಲ್ಲಿ ಬೆಳಕು ಬೀರುತ್ತದೆ. ನಂಬಿದವರಿಗೆ ಸತ್ಯ ಸುಖವನ್ನೀವೆನೆಂದು ಕೈ ಎತ್ತಿ ಸಾರುತ್ತದೆ.

Shopping cart

0
image/svg+xml

No products in the cart.

Continue Shopping