ಧಾರ್ಮಿಕ ಸೇವೆಗಳು

ಹಿಂದು ಧರ್ಮದ ಎಲ್ಲ ರೀತಿಯ ಧಾರ್ಮಿಕ ಕಾರ್ಯಗಳನ್ನು ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗದೇ ಎಲ್ಲ ಸಮುದಾಯದವರಿಗೆ ಹುಟ್ಟಿನಿಂದ ಅಂತ್ಯದವರೆಗಿನ ಹಾಗೂ ಗೃಹ ಪ್ರವೇಶಾದಿಯಾಗಿ ವಿವಿಧ ಶಾಂತಿ,ಜಪ, ಹೋಮಗಳನ್ನು ಶಾಸ್ತ್ರೋಕ್ತವಾಗಿ ಪಾಠಶಾಲೆಯ ವಿದ್ಯಾರ್ಥಿಗಳೇ ನೆರವೇರಿಸುವರು.

ಧಾರ್ಮಿಕ ಚಟುವಟಿಕೆಗಳು

ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆಯಿಂದ 9 ನೇ ದಿನಕ್ಕೆ ಪಾಠಶಾಲಾ ಸಂಸ್ಥಾಪಕರಾದ ಪೂಜ್ಯ ಲಿಂ‌.ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಪುಣ್ಯ ಸ್ಮರಣೋತ್ಸವ

* ಅಗಷ್ಟ 21 ನೇ ತಾರೀಖಿನಂದು ಸಿಂದಗಿ ಶಾಂತವೀರ ಶ್ರೀ ಗಳ ಜಯಂತ್ಯೋತ್ಸವ

* ಭಾದ್ರಪದ ಶುದ್ಧ ತ್ರಯೋದಶಿ ಹಾನಗಲ್ ಗುರುಕುಮಾರ ಮಹಾಸ್ವಾಮಿಗಳ
ಜಯಂತ್ಯೋತ್ಸವ

* ಮಾಘ ಬಹಳ ಸಪ್ತಮಿ ಹಾನಗಲ್ ಕುಮಾರ ಮಹಾಶಿವಯೋಗಿಗಳ ಪುಣ್ಯಸ್ಮರಣೋತ್ಸವ

* ಫೆಬ್ರವರಿ 21 ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜಯಂತಿ

* ಆಶ್ವೀಜ ಶುದ್ಧ ಏಕಾದಶಿ ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ

ಹಿಂದು ಧರ್ಮದ ಎಲ್ಲ ರೀತಿಯ ಅಂದರೆ ಪುಂಸವನ, ಸೀಮಂತ, ಶಿವದೀಕ್ಷಾ, ವಿವಾಹ, ಗೃಹ ಪ್ರವೇಶ , ವಿವಿಧ ಶಾಂತಿಗಳು ಇತ್ಯಾದಿ ಎಲ್ಲ ಕಾರ್ಯಗಳನ್ನು ಪಾಠಶಾಲೆಯ ಮಕ್ಕಳೇ ನೆರವೇರಿಸುವರು

Shopping cart

0
image/svg+xml

No products in the cart.

Continue Shopping