ಹಿಂದು ಧರ್ಮದ ಎಲ್ಲ ರೀತಿಯ ಧಾರ್ಮಿಕ ಕಾರ್ಯಗಳನ್ನು ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗದೇ ಎಲ್ಲ ಸಮುದಾಯದವರಿಗೆ ಹುಟ್ಟಿನಿಂದ ಅಂತ್ಯದವರೆಗಿನ ಹಾಗೂ ಗೃಹ ಪ್ರವೇಶಾದಿಯಾಗಿ ವಿವಿಧ ಶಾಂತಿ,ಜಪ, ಹೋಮಗಳನ್ನು ಶಾಸ್ತ್ರೋಕ್ತವಾಗಿ ಪಾಠಶಾಲೆಯ ವಿದ್ಯಾರ್ಥಿಗಳೇ ನೆರವೇರಿಸುವರು.
ಧಾರ್ಮಿಕ ಚಟುವಟಿಕೆಗಳು
ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆಯಿಂದ 9 ನೇ ದಿನಕ್ಕೆ ಪಾಠಶಾಲಾ ಸಂಸ್ಥಾಪಕರಾದ ಪೂಜ್ಯ ಲಿಂ.ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಪುಣ್ಯ ಸ್ಮರಣೋತ್ಸವ
* ಅಗಷ್ಟ 21 ನೇ ತಾರೀಖಿನಂದು ಸಿಂದಗಿ ಶಾಂತವೀರ ಶ್ರೀ ಗಳ ಜಯಂತ್ಯೋತ್ಸವ
* ಭಾದ್ರಪದ ಶುದ್ಧ ತ್ರಯೋದಶಿ ಹಾನಗಲ್ ಗುರುಕುಮಾರ ಮಹಾಸ್ವಾಮಿಗಳ ಜಯಂತ್ಯೋತ್ಸವ
* ಮಾಘ ಬಹಳ ಸಪ್ತಮಿ ಹಾನಗಲ್ ಕುಮಾರ ಮಹಾಶಿವಯೋಗಿಗಳ ಪುಣ್ಯಸ್ಮರಣೋತ್ಸವ
* ಫೆಬ್ರವರಿ 21 ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜಯಂತಿ
* ಆಶ್ವೀಜ ಶುದ್ಧ ಏಕಾದಶಿ ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ
ಹಿಂದು ಧರ್ಮದ ಎಲ್ಲ ರೀತಿಯ ಅಂದರೆ ಪುಂಸವನ, ಸೀಮಂತ, ಶಿವದೀಕ್ಷಾ, ವಿವಾಹ, ಗೃಹ ಪ್ರವೇಶ , ವಿವಿಧ ಶಾಂತಿಗಳು ಇತ್ಯಾದಿ ಎಲ್ಲ ಕಾರ್ಯಗಳನ್ನು ಪಾಠಶಾಲೆಯ ಮಕ್ಕಳೇ ನೆರವೇರಿಸುವರು